breaking news

ಬೀದಿನಾಟಕದ ಮೂಲಕ ಅರಿವು ಕಾರ್ಯಕ್ರಮ: ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನ

ಬೀದಿನಾಟಕದ ಮೂಲಕ ಅರಿವು ಕಾರ್ಯಕ್ರಮ: ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನ

Street dramas can be used as an effective way to raise awareness about social issues

ತುಮಕೂರು(ಕ.ವಾ.)ಸೆ.೪: ತಾಲ್ಲೂಕು ವ್ಯಾಪ್ತಿಯಲ್ಲಿ ದೌರ್ಜನ್ಯ
ಪ್ರಕರಣಗಳು ಹೆಚ್ಚಾಗಿ ಜರುಗುತ್ತಿರುವ ಗ್ರಾಮ ಪಂಚಾಯತಿ,
ಹೋಬಳಿ ಕೇಂದ್ರ ಹಾಗೂ ನಗರ ಪ್ರದೇಶಗಳಲ್ಲಿ ಬೀದಿ ನಾಟಕದ
ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿಚಾರಗೋಷ್ಠಿ ಮತ್ತು
ಕಾರ್ಯಾಗಾರವನ್ನು ಆಯೋಜಿಸಲು ಸಂಘ ಸಂಸ್ಥೆಗಳಿಂದ ಅರ್ಜಿ
ಆಹ್ವಾನಿಸಲಾಗಿದೆ ಎಂದು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ
ಸಹಾಯಕ ನಿರ್ದೇಶಕ(ಗ್ರೇಡ್-೧) ಶಿವಣ್ಣ ವಿ.ಎಸ್. ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.


ಅರ್ಜಿ ಸಲ್ಲಿಸುವ ಸಂಘ-ಸಂಸ್ಥೆಗಳು ಅಗತ್ಯ
ದಾಖಲಾತಿಗಳೊಂದಿಗೆ ತಮ್ಮ ಅರ್ಜಿಯನ್ನು ಸೆಪ್ಟೆಂಬರ್ ೧೦ರೊಳಗಾಗಿ
ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ತುಮಕೂರು ಜಿಲ್ಲೆ
ಇವರಿಗೆ ಸಲ್ಲಿಸಬಹುದಾಗಿದೆ.


ಆಸಕ್ತ ಸಂಘ ಸಂಸ್ಥೆಗಳು ಅರ್ಜಿಯೊಂದಿಗೆ ಸಂಘ/ಸಂಸ್ಥೆಯ
ನೋಂದಣಿ ಪ್ರಮಾಣ ಪತ್ರ ಮತ್ತು ನವೀಕರಣ ಪ್ರಮಾಣ ಪತ್ರ;
ಪ್ರತಿ ವರ್ಷ ಆಡಿಟ್ ಮಾಡಿಸಿರುವ ವರದಿ; ಸಂಘ/ಸಂಸ್ಥೆಯು ಪ.ಜಾತಿ
ಮತ್ತು ಪ.ವರ್ಗದ ಅಭಿವೃದ್ಧಿಗಾಗಿ ೫ ವರ್ಷ ಸೇವೆ ಸಲ್ಲಿಸಿರುವ ಬಗ್ಗೆ
ದೃಢೀಕೃತ ದಾಖಲೆ; ಅರಿವು ಮೂಡಿಸುವ ಕಾರ್ಯಕ್ರಮ
ಆಯೋಜಿಸಿರುವ ಬಗ್ಗೆ ದಾಖಲೆಗಳು, ಛಾಯಾಚಿತ್ರ, ಕರ ಪತ್ರ,
ಭಿತ್ತಿ ಪತ್ರ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ
ಮೊ.ಸಂ.೯೪೪೯೩೨೭೧೮೭ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು
ತಿಳಿಸಿದ್ದಾರೆ.

Awareness program through street drama: Applications invited from organisations

Share this post

About the author

Leave a Reply

Your email address will not be published. Required fields are marked *