ನದಾಪ್ ಪಿಂಜಾರ ಸಮುದಾಯಕ್ಕೆ ಸವಲತ್ತು ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಅಖಿಲ ಕರ್ನಾಟಕ ಜಮಾತ್ ಎ ಮನ್ಸೂರಿ ಸಂಘಟನೆಯ ಜಿಲ್ಲಾಧ್ಯಕ್ಷ ಬಷೀರ್ ಅಹಮದ್ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ನದಾಫ್ ಪಿಂಜಾರ ಸಮುದಾಯವು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣ ಕವಾಗಿ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು ಇದಕ್ಕೆ ಯಾವುದೇ ಸವಲತ್ತುಗಳನ್ನು ನೀಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಪ್ರವರ್ಗ-1ಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಬಾರಿ ಸರ್ಕಾರಕ್ಕೆ ಸಂಘಟನೆಯ ಮುಖಾಂತರ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಈ ಹಿಂದೆ ಕೋವಿಡ್ ಆಹಾರದ ಕಿಟ್ ವಿತರಣಾ ಸಂದರ್ಭದಲ್ಲಿಯೂ ಸಹ ಜನಾಂಗವನ್ನು ಯಾವುದೇ ರೀತಿಯಲ್ಲಿ ಸರ್ಕಾರ ಪರಿಗಣ ಸಿಲ್ಲ ಆದ್ದರಿಂದ ಸಮುದಾಯದ ಅಭಿವೃದ್ಧಿಗಾಗಿ ನದಾಫ್ ಪಿಂಜಾರ ಸಮುದಾಯದ ನಡೆ ವಿಧಾನಸೌಧದ ಕಡೆ ಎಂಬ ಹೋರಾಟವನ್ನು ರೂಪಿಸಲಾಗುತ್ತಿದ್ದು ಜನಾಂಗದ ನಾಗರಿಕರೆಲ್ಲರೂ ಸಹ ಸಂಘಟನೆಯೊಂದಿಗೆ ಕೈಜೋಡಿಸಿ ಸಮುದಾಯಕ್ಕೆ ಬರಬೇಕಾದ ಸವಲತ್ತುಗಳನ್ನು ಪಡೆಯಲು ಹೋರಾಟ ನಡೆಸಲು ಬೆಂಬಲ ನೀಡಬೇಕೆಂದು ಕೋರಿದರು.
ಇದೇ ವೇಳೆ ಅವರು ಮಾತನಾಡಿ ಸಮುದಾಯದಲ್ಲಿ ಅತಿ ಹೆಚ್ಚು ಕಡುಬಡವರಿದ್ದು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಿಸುವಲ್ಲಿ ಸಹ ಪೆÇೀಷಕರಿಗೆ ತೊಂದರೆ ಉಂಟಾಗುತ್ತಿದೆ ಎಲ್ಲ ಕಾರಣಗಳಿಂದ ಜಮಾತೆ ಮನ್ಸೂರಿ ಹಾಗೂ ನಗರ ಸಂಘಟನೆಗಳ ವತಿಯಿಂದ ಮುಂಬರುವ ದಿನದಲ್ಲಿ ರಾಜ್ಯವ್ಯಾಪಿ ಹೋರಾಟವನ್ನು ನಡೆಸುವುದರ ಮೂಲಕ ಸಮುದಾಯದ ಅಸ್ತಿತ್ವವನ್ನು ಸಮಾಜದಲ್ಲಿ ಮೂಡಿಸಬೇಕೆಂದು ಕರೆ ನೀಡಿದರು