Accidents occurred on the Ring Road and the Public protested by blocking the Road
ತುಮಕೂರು : ನಗರದ ರಿಂಗ್ ರಸ್ತೆಯ ಟೊಯೋಟಾ ಶೋ ರೂಂ ಡಿಎಟಿ ಸರ್ಕಲ್ ಬಳಿ ಕ್ಯಾಂಟರ್ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಹೆಚ್ಚುತ್ತಿರುವ ಅಪಘಾತ ತಡೆಯಲು ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮವಹಿಸುವಂತೆ ಸ್ಥಳೀಯ ರಸ್ತೆ ತಡೆದು ಪ್ರತಿಭಟಿಸಿದ ಘಟನೆ ರಿಂಗ್ ರಸ್ತೆಯಲ್ಲಿ ನಡೆದಿದೆ.
ತುಮಕೂರು ನಗರ ಹೊರವಲಕ್ಕೆ ಜೊಡಿಸಿರುವ ರಿಂಗ್ ರಸ್ತೆಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು ಸಾವು ನೋವುಗಳು ಹೆಚ್ಚಾಗುತ್ತಿವೆ ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಯವರು ಅಪಘಾತ ತಡೆಯವಲ್ಲಿ ವಿಫಲರಾಗಿದ್ದಾರೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ರಿಂಗ್ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಇನ್ನೂ ಅಪಘಾತದಲ್ಲಿ ನಗರದ ಮಂಡಿಪೇಟೆಯಲ್ಲಿರುವ ಭಾರತ್ ಹಾರ್ಡ್ವೇರ್ ಅಂಗಡಿಯ ಮಾಲೀಕರಾದ ನದೀಮ್ ಪಾಷಾ ಸುಮಾರು (52) ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಶಫಿ ಅಹಮದ್ ಶರೀಫ್ ರವರು ಮಾತನಾಡಿ ರಿಂಗ್ ರಸ್ತೆಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತದೆ ಇದೆ ತಿಂಗಳಲ್ಲಿ ನಾಲ್ಕು ಜನ ಅಪಘಾತದಿಂದ ಮೃತಪಟ್ಟಿದ್ದಾರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಅಪಘಾತಗಳು ತಡೆಯುವ ನಿಟ್ಟಿನಲ್ಲಿ ಸರ್ಕಲ್ ಬಳಿ ಹಂಪ್ಗಳು, ಸ್ಟ್ರೀಟ್ ಲೈಟ್, ಜೀಬ್ರಾ ಕ್ರಾಸ್, ಸಿಸಿಟಿವಿ ಕ್ಯಾಮೆರಾ ಹಾಕಬೇಕಾಗಿದೆ ಇಲ್ಲದಿದ್ದರೆ ಸ್ಥಳೀಯರು ಸೇರಿ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಶಫಿ ರವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆಪಿಸಿಸಿ ಮುಖಂಡರಾದ ಇಕ್ಬಾಲ್ ಅಹಮದ್ ರವರು ಅಪಘಾತ ನಡೆದ ಸ್ಥಳಕ್ಕೆವಭೇಟಿ ನೀಡಿ ಸಾರ್ವಜನಿಕರ ಜೊತೆ ಮಾತನಾಡಿ ಅಪಘಾತಗಳು ತಡೆಯಲು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸೋಣ ಎಂದು ಹೇಳಿದರು.
ಅಪಘಾತ ನಡೆದ ಸ್ಥಳಕ್ಕೆ ಟ್ರಾಫಿಕ್ ಕಂಟ್ರೋಲರ್ ಗುರುನಾಥ್, ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಮತ್ತು ಪಿಎಸ್ಐ ಮೂರ್ತಿರವರು ಭೇಟಿ ನೀಡಿ ಪರಿಶೀಲನೆ ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.