ತುಮಕೂರು: ನಗರದ ೧೩ನೇ ವಾರ್ಡಿನ ಕುರಿಪಾಳ್ಯದ ಆಜಾಂ ನಗರದಲ್ಲಿ
ಒಳಚರಂಡಿಯ ಕೊಳಚೆ ನೀರು ಮನೆಗಳಿಗೆ ನುಗ್ಗಿ ಅಲ್ಲಿನ ನಿವಾಸಿಗಳು
ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಒಳಚರಂಡಿ ಕೊಳಚೆ
ಮಳೆ ನೀರಿನ ಚರಂಡಿಯಲ್ಲಿ ಹರಿಯುತ್ತಿದ್ದು ಒಮ್ಮೊಮ್ಮೆ ಉಕ್ಕಿ ಹರಿದು
ಮನೆಗಳಿಗೆ ನುಗ್ಗಿ ಸಮಸ್ಯೆಯಾಗಿದೆ.
ಆಜಾಂ ನಗರದ ನಿವಾಸಿಗಳು ಬುಧವಾರ ನಗರ ಪಾಲಿಕೆ ಕಚೇರಿಯಲ್ಲಿ
ಆಯುಕ್ತೆ ಬಿ.ವಿ.ಅಶ್ವಿಜ ಅವರನ್ನು ಭೇಟಿ ಮಾಡಿ ಮನವಿ ಪತ್ರ ನೀಡಿ, ಸಮಸ್ಯೆ
ಬಗ್ಗೆ ಹೇಳಿಕೊಂಡರು. ಯುಜಿಡಿ ಸಮಸ್ಯೆಯಿಂದ ಮನೆಯಲ್ಲಿ ವಾಸ
ಮಾಡಲಾಗದಂತಹ ಪರಿಸ್ಥಿತಿಯಾಗಿದೆ. ಕೂಡಲೇ ಈ ತೊಂದರೆ ನಿವಾರಣೆ
ಮಾಡಲು ಕ್ರಮ ತೆಗೆದುಕೊಳ್ಳುವಂತೆ ಆಯುಕ್ತರಿಗೆ ಮನವಿ
ಮಾಡಿದರು.

ಆ ಭಾಗದ ಮುಖಂಡ, ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ
ಶಂಕರ್ ಮಾತನಾಡಿ, ಹಲವು ದಿನಗಳಿಂದ ಆಜಾಂ ನಗರದ ಹಲವು
ಮನೆಗಳಿಗೆ ಯುಜಿಡಿ ನೀರು ಹರಿದು ಜನರಿಗೆ ತೊಂದರೆಯಾಗಿದೆ. ಈ ಗಂಭೀರ
ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸಿ ಬಗೆಹರಿಸಿಲ್ಲ
ಎಂದರು.
ಖಾಸಗಿಯವರು ಶೌಚಾಲಯದ ಕೊಳಚೆಯನ್ನು ಮಳೆ ನೀರಿನ ಚರಂಡಿಗೆ
ಹರಿಯಲು ಬಿಟ್ಟಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಮಳೆಗಾಲದಲ್ಲಿ ಮಳೆ
ನೀರೂ ಸೇರಿ ಹೆಚ್ಚಿನ ತೊಂದರೆಯಾಗುತ್ತದೆ. ಇಲ್ಲಿ ಯುಜಿಡಿ ಹಾಗೂ ಚರಂಡಿ
ವ್ಯವಸ್ಥೆ ಸಮರ್ಪಕವಾಗಿಲ್ಲ, ಯುಜಿಡಿ ಮಲೀನ ನೀರು ರಸ್ತೆ, ಚರಂಡಿಯಲ್ಲಿ
ಹರಿಯುತ್ತದೆ, ಮನೆಗಳಿಗೆ ನುಗ್ಗುತ್ತದೆ. ಇದರಿಂದ ಈ ಭಾಗದಲ್ಲಿ
ದುರ್ವಾಸನೆಯಿಂದಾಗಿ ಜನ ಉಸಿರುಕಟ್ಟಿ ಬದುಕುವಂತಾಗಿದೆ. ನಗರಪಾಲಿಕೆ
ಕೂಡಲೇ ಸೂಕ್ತ ಕ್ರಮ ತೆಗೆದುಕೊಂಡು ಸಮಸ್ಯೆ ನಿವಾರಿಸುವಂತೆ
ಶAಕರ್ ಒತ್ತಾಯಿಸಿದರು.
೧೩ನೇ ವಾರ್ಡಿನ ವಿವಿಧ ಮಹಿಳಾ ಮುಖಂಡರು ಈ ವೇಳೆ ಹಾಜರಿದ್ದರು.