ತುಮಕೂರು: ದಿನ ನಿತ್ಯದಲ್ಲಿ ವ್ಯವಹರಿಸುವಾಗ ಎಲ್ಲರು ಕನ್ನಡವನ್ನೇ ಬಳಸಿ ಕನ್ನಡ ಸಂಸ್ಕøತಿಯನ್ನು ಉಳಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಕಾಲೇಜಿನ ಸಾಹೇ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಜಿ ಪರಮೇಶ್ವರ್ ಕರೆನೀಡಿದರು.
ಅವರು ಶ್ರೀ ಸಿದ್ಧಾರ್ಥ ಎಂಜನಿಯರಿಂಗ್ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪುನಿತ್ ರಾಜಕುಮಾರ್‍ರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಕನ್ನಡ ಉಳಿಸಿ ಕಟ್ಟಿ ಬೆಳೆಸುವ ಕೆಲಸ ಮಾಡಬೇಕು ಎಂದು ಕಿವಿಮಾತು ತಿಳಿಸಿದರು.
ಕನ್ನಡೇತರರಿಗೆ ಕನ್ನಡ ಕಲಿಸಲು ಕನ್ನಡ ನುಡಿ, ಸಂಸ್ಕøತಿ, ಪರಂಪರೆ ಉಳಿಸಲು ಸಧಾ ಬದ್ಧರಾಗಬೇಕು ಮತ್ತು ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡಬೇಕು, ಅತ್ಯಂತ ಸಡಗರ-ಸಂಭ್ರಮದಿಂದ ಎಲ್ಲ ಜಾತಿ ಮತ ಧರ್ಮಗಳ ಜನರು ಒಗ್ಗೂಡಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಎಸ್. ರವಿಪ್ರಕಾಶ್ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕನ್ನಡ ಉಳಿಸಿ ಕಟ್ಟಿ ಬೆಳೆಸಬೆಕೆಂದು ತಿಳಿಸಿದರು. ಬದುಕಿನ ಜೀವನಾಡಿಯಾಗಿಸುವ ನಿಟ್ಟಿನಲ್ಲಿ ನಾವು ನವೆÀಂಬರ್‍ಗೆ ಮಾತ್ರ ಕನ್ನಡಿಗರಾಗದೇ, ವರ್ಷಪೂರ್ತಿ ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳು ಡಾ. ಜಿ ಪರಮೇಶ್ವರ್, ಪ್ರಾಂಶುಪಾಲರಾದ ಎಂ.ಎಸ್.ರವಿಪ್ರಕಾಶ್, ಸಾಹೆ ವಿವಿ ಕುಲಸಚಿವರಾದ ಡಾ.ಎಂ.ಝಡ್.ಕುರಿಯನ್, ಡಾ.ಎಂ ಸಿದ್ದಪ್ಪ, ಡಾ.ಕೆ.ಬಿ.ಶಿವಕುಮಾರ್, ಡಾ.ಕೆ ಕರುಣಾಕರ್ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ಪ್ರಾಧ್ಯಾಪಕರು ಉಪಸ್ಥಿತಿತರಿದ್ದರು.