News

ಅಂಬೇಡ್ಕರ್ ಪ್ರಚಾರ ಸಮಿತಿಯಿಂದ ಸ್ವಾಮಿ ವಿವೇಕಾನಂದರ 162ನೇ ಜನ್ಮದಿನಾಚರಣೆ

ಅಂಬೇಡ್ಕರ್ ಪ್ರಚಾರ ಸಮಿತಿಯಿಂದ ಸ್ವಾಮಿ ವಿವೇಕಾನಂದರ 162ನೇ ಜನ್ಮದಿನಾಚರಣೆ
162nd Birth Anniversary of Swami Vivekananda by Ambedkar Prachara Samiti

ತುಮಕೂರು: ಜಿಲ್ಲಾ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ
ಸಮಿತಿ ವತಿಯಿಂದ ಸ್ವಾಮಿ ವಿವೇಕಾನಂದರ 162ನೇ ಜನ್ಮದಿನವನ್ನು ಜಿಲ್ಲಾ
ಕಚೇರಿಯಲ್ಲಿ ಪುಷ್ಪ ನಮನ ಸಲ್ಲಿಸುವುದರ ಮೂಲಕ ಸಿಹಿ ಹಂಚಿ
ಆಚರಿಸಲಾಯಿತು.


ಈ ವೇಳೆ ಮಾತನಾಡಿದ ತುಮಕೂರು ಜಿಲ್ಲಾ ಅಖಿಲ ಭಾರತ ಡಾ.ಅಂಬೇಡ್ಕರ್
ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ
ಎನ್.ಕೆ.ನಿಧಿಕುಮಾರ್,ಸ್ವಾಮಿವಿವೇಕಾನಂದರು ಯುವಕರಿಗೆ ಸ್ಪೂರ್ತಿಯ
ಚಿಲುಮೆಯಾಗಿದ್ದರು,ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬ
ಪ್ರಕರ ಸಂದೇಶದಿಂದ ಅಂಧಕಾರದಲ್ಲಿ ಮುಳುಗಿದ್ದ ಭಾರತದ ಯುವ
ಜನತೆಯನ್ನು ಬೆಳಕಿನಲ್ಲಿ ಪ್ರಜ್ವಲಿಸುವಂತೆ ಮಾಡಿದ
ಯುಗಪುರುಷರು.ಸ್ವಾಮಿ ವಿವೇಕಾನಂದರ ಹೆಸರು ಕೇಳಿದೊಡೆ ಮನ
ಪುಳಕಿತ ಗೊಳ್ಳುತ್ತದೆ ಸ್ಪೂರ್ತಿಯ ಚಿಲುಮೆ ಉಕ್ಕಿ
ಹರಿಯುತ್ತದೆ.ದೇಶದ ಸಹಬಾಳ್ವೆಯನ್ನು ಬೆಳಗಲು ಅವತರಿಸಿದ ಯುಗ
ಪುರುಷರು. ಅವರ ಆದರ್ಶಗಳನ್ನ ನಾವೆಲ್ಲರು ಪಾಲಿಸಬೇಕಿದೆ ಎಂದರು.


ತುಮಕೂರು ಜಿಲ್ಲಾ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಹಿಂದೂಳಿದ
ವರ್ಗದ ಜಿಲ್ಲಾಧ್ಯಕ್ಷರಾದ ಎಸ್.ರಾಮಚಂದ್ರ ರಾವ್ ಮಾತನಾಡಿ,ಸದಾ
ಯುವಜನತೆಯನ್ನು ಉರಿದುಂಬಿಸುತ್ತಿದ್ದ ಸ್ವಾಮಿ ವಿವೇಕಾನಂದರು
ಆಧ್ಯಾತ್ಮಿಕ ದತ್ತ ಹೆಚ್ಚಿನ ಒಲವನ್ನು ಹೊಂದಿದ್ದರು.ಹೀಗಾಗಿ ಎಲ್ಲಾ ಲೌಕಿಕ
ಸುಖಗಳನ್ನು ತ್ಯಜಿಸಿ ಸನ್ಯಾಸಿಯಾದರು.

1893ರಲ್ಲಿ ಚಿಕಾಗೋದಲ್ಲಿ ನಡೆದ
ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣ
ಇಂದಿಗೂ ಪ್ರಸ್ತುತ.ಆ ಭಾಷಣದಿಂದ ಇಡೀ ವಿಶ್ವವೇ ಭಾರತವನ್ನು ನೋಡುವ
ದೃಷ್ಟಿಯೇ ಬದಲಾಯಿತು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ
ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಇಂದ್ರಕುಮಾರ್.ಡಿ.ಕೆ,ಅಲ್ಪಸಂಖ್ಯಾತ
ಘಟಕದ ಜಿಲ್ಲಾಧ್ಯಕ್ಷರಾದ ಶಬ್ಬೀರ್‍ಅಹ್ಮದ್,ಯುವ ಘಟಕದ ಜಿಲ್ಲಾ
ಕಾರ್ಯಾಧ್ಯಕ್ಷರಾದ ಎಸ್ ನಾರಾಯಣ್,ಯುವ ಘಟಕದ ಜಿಲ್ಲಾ
ಉಪಾಧ್ಯಕ್ಷರಾದ ಶ್ರೀನಿವಾಸ್.ಎನ್.ವಿ,ಪದಾಧಿಕಾರಿಗಳಾದ ಕಿರಣ್, ಗೋವಿಂದರಾಜು
ಕೆ, ಸುರೇಶ್ ಕುಮಾರ್, ಶ್ರೀನಿವಾಸ್‍ರಾವ್ ಉಪಸ್ಥಿತರಿದ್ದರು.

Share this post

About the author

Leave a Reply

Your email address will not be published. Required fields are marked *